Wednesday 15 February 2017

ಗೃಹಿಣಿಯ ಒಡಲಾಳ






ಒಣಸೋಗೆ ಮಡಿಲುಗರಿ ಹಾಕಿ
ಹಚ್ಚಿದ ಬಚ್ಚಲ ಒಲೆ
ಊದುಯೂದಿ ಹೊಗೆಯನ್ನೆಬ್ಬಿಸಿ
ನಿಗಿನಿಗಿಯಾಗಿಸಿದ ಹಂಡೆಯ ನೀರು
ಎಲ್ಲರಿಗೆ ಅಭ್ಯಂಜನ ಮಾಡಿಸಿ
ಎಮ್ಮೆ ಕೊಟ್ಟಿಗೆ ತೊಳೆದು
ಕುಡಿಯಲು ಕಲಗಚ್ಚಿತ್ತು
ಸ್ನಾನಕ್ಕೆಂದಿವಳು ಬರುವ ವೇಳೆ
ಬಚ್ಚಲ ಹಂಡೆಯಲ್ಲಿತ್ತು ತಣ್ಣೀರು
ಹರಿದವಳ ಕೆನ್ನೆತೋಸಿತ್ತು ಬೆಚ್ಚಗಿನ ಕಣ್ಣೀರು||೧||
ತರೇವಾರಿ ತರಕಾರಿ ಹೆಚ್ಚಿ
ಸಾಲಾಗಿ ಕಾಳಪಲ್ಲೆ ಬಿಡಿಸಿ
ಇಂಗು ತೆಂಗಿನ ಒಗ್ಗರಣೆ ಸಿಡಿಸಿ
ಬಾಳೆಯೆಲೆಯಿಟ್ಟು ಊಟ ಬಡಿಸಿ
ಎಲೆಯೆತ್ತಿ ನಾಯಿಗೆಸೆದು
ಗೋಮಯವಿಟ್ಟು ಎಂಜಲು ಸಾರಿಸಿ
ಇವಳೂಟಕೆ ಕೂರುವ ವೇಳೆ
ಬಿರುವಾದ ಬಿಳಿಯನ್ನ-ತಿಳಿಸಾರು ಮಿಕ್ಕಿ
ಮನ ಶಬ್ಧವಿಲ್ಲದೇ ಬಿಕ್ಕಿ
ತುತ್ತನುಂಡು ಅವಳೆದ್ದಳು ಮೆಲ್ಲಗೆ ಬಿಕ್ಕುವ ಕದವನ್ನಿಕ್ಕಿ ||೨||
ಒಳಜಗುಲಿಯ ಗೋಡೆಗೊರಗಿ
ಸುಣ್ಣವಚ್ಚಿ ಕವಳ ಮೆದ್ದು
ಮೆಲ್ಲನುಸುರುತ್ತಿದ್ದರವರು
ಮರುಮದುವೆಯ ಪಿಸುಮಾತ
ಬರಡುಭೂಮಿಗೆ ಬೀಜವಿಲ್ಲದೇ
ಫಸಲು ಚಿಗುರಲು ಜಾಗವೆಲ್ಲಿದೇ?
ನನ್ನ ಉತ್ತರವಿಲ್ಲದ ಪ್ರಶ್ನೆಗೆ
ಹಿತ್ತಲಬಾಗಿಲಲ್ಲಿ ಉದಿರಿತ್ತು ಕಂಬನಿ
ಹೆಬ್ಬಾಗಿಲಿನ ಸಂದಲ್ಲೆಲ್ಲಾ ಮೌನದನಿ
ಕಂಬದಲ್ಲಿನ ಗೊಂಬೆಯಲ್ಲಿ ಕನವರಿಕೆಯ ಕೊನೆಹನಿ||೩||
ಶುಭಶ್ರೀ ಭಟ್ಟ

7 comments:

Unknown said...

Tumba chennagi baredidhya Shubha.. Bhesh...

ಸಂಧ್ಯಾ ಶ್ರೀಧರ್ ಭಟ್ said...

Lovely

Shubhashree Bhat said...

ಥ್ಯಾಂಕ್ಸ್ ಶಿವಣ್ಣಾ & ಥ್ಯಾಂಕ್ಸು ಸಂಧ್ಯಾ dear :)

Mahalaxmi said...

Super

Mahalaxmi said...

Super

ramachandrasagar said...

ಒಂದು ‌ಕಾಲದಲ್ಲಿ ‌ಇದೆಲ್ಲೂ ‌ಹೆಣ್ಣಿಗೆ ‌ಸಾಮಾನ್ಯವಾಗಿತ್ತು. ‌ಈಗ ‌ಕಡಿಮೆಯಾಗುತ್ತಿರಬಹುದು.‌ಸುಧಾರಣೆ ‌‌ಅಗತ್ಯವಿದೆ..‌ಭಾವನೆಗಳನ್ನು ‌ಉತ್ತಮವಾಗಿ ‌ವ್ಯಕ್ತಪಡಿಸಿರುವಿರಿ..
‌ದಯಮಾಡಿ ‌ಪ್ರಾಸಗಳ ‌ಕಡೆ ‌ಗಮನಕೊಡಿ..ಉತ್ತಮ ‌ಬರವಣಿಗೆಯ ‌ಲಕ್ಷಣಗಳಿವೆ..

Shubhashree Bhat said...

Thanks all :) Thanks Mahalaxmi akka :) Thanks a lot Ramachandra sir for ur valuable feedback :)

"ಗೋಟಡಕೆಗೆ ಸಿಕ್ಕ ಮಿಠಾಯಿ"

ಬಾಯಲ್ಲಿಟ್ಟರೆ ಕರಗುವ,ಕಲ್ಲುಸಕ್ಕರೆಗಿಂತ ಸಿಹಿಯಾದ,ಮೆದ್ದರೆ ಬಾಯೆಲ್ಲಾ ಕೆಂಗುಲಾಬಿಯಂತಾಗುವ 'ಬೊಂಬಾಯಿ ಮಿಠಾಯಿ' ಅಂದರೆ ನಮಗೆಲ್ಲಾ ಅದೇನೋ ಅಚ್ಚರಿ,ಕುತೂ...