Monday 26 December 2016

ನನಗೀಗ ನಿನ್ನದೇ ನೆನಪು...




ಇಂಪಾದ ಕೋಗಿಲೆ ಕಲರವ
ಸಂಪಿಗೆ ಸೂಸುವ ಪರಿಮಳ
ತಂಪಾಗಿ ತೂಗಿಬರೊ ತಂಗಾಳಿ
ಯಾವುದರ ಅರಿವಿಲ್ಲ-ನನಗೀಗ ನಿನ್ನದೇ ನೆನಪು

ಕಣ್ಮನ ತಣಿಸುವ ಗಿರಿಸಾಲು
ಮನ ಮುದಗೊಳಿಸುವ ಬೆಳ್ಮುಗಿಲು
ಕಚಗುಳಿಯಿಡುವ ಕಡಲತೀರ
ಯಾವುದೂ ಬೇಕಿಲ್ಲ-ನನಗೀಗ ನಿನ್ನದೇ ನೆನಪು

ಅಸ್ತಗಿರಿಯತ್ತ ಓಡುವ ಸೂರ್ಯ
ಸಂಜೆವೆಣ್ಣಿನ ನೇಸರ ನೆರಳು
ಮುಸ್ಸಂಜೆಯ ದೀಪದ ಬೆಳಕು
ಯಾವುದೂ ತಿಳಿತಿಲ್ಲ-ನನಗೀಗ ನಿನ್ನದೇ ನೆನಪು

ನಿನ್ನೊಲುಮೆಯ ಕಡಲಲ್ಲಿ ತೇಲಿ
ನಿನ್ನ ತೋಳಸೆರೆಯಲ್ಲಿ ಬಂಧಿಯಾಗಿ
ಸದಾ ನಿನ್ನ ಪ್ರೇಮಖೈದಿಯಾಗುವಾಸೆ
ಬೇಗ ಬಾ ಇನಿಯ-ನನಗಂತೂ ನಿನ್ನದೇ ನೆನಪು


  -ಶುಭಶ್ರೀ ಭಟ್ಟ

Saturday 7 May 2016

ಗಾಳಕ್ಕೆ ಸಿಕ್ಕ ಮೀನು






"ನಂಗಿಷ್ಟಾಗಿದ್ದನ್ನ ಮಾಡಬೇಡ ಯಾವಾಗ್ಲೂ ದೋಸೆ ಇಡ್ಲಿನೇ"ಎಂದು ಸಿಡಿಮಿಡಿಗೊಳ್ಳುವ ತಂಗಿ."ನನ್ನ ಪೆನ್ನಲ್ಲಿ ಇಂಕು ಖಾಲಿಯಾಯ್ದು,ಕರ್ಚಿಫ್ಕಾಣಿಸ್ತಿಲ್ಲೆ,ಛತ್ರಿ ಎಲ್ಲಿಟ್ಟಿದ್ದೆಎಂದು ಕಿರಿಚುವ ನಾನು.ನಮ್ಮನ್ನು ಶಾಲೆಗೆ ಕಳುಹಿಸಿ ತಿಂಡಿತಿನ್ನುವ ಹೊತ್ತಿಗೆ "ಒಡ್ತಿರೇ!! ಪಾತ್ರೆ ತಿಕ್ಕುದು (ಸೋಪ್)ಖಾಲಿನ್ರೊಕರು ನೋಡ್ರಾ ಅಕ್ಕಚ್ಚು (ಕಲಗಚ್ಚುಕುಡ್ಯುದಿಲ್ಲಾ"- ಮಾಸ್ತಿಯ ಕಾಟ."ಜಯಾ ನನ್ನ ವಾಚ್ ಎಲ್ಲಿ?, ಚೀಟಿ ಕೊಡು ಬೇಗಾ"- ಅಪ್ಪನ ಗೋಳುಹೀಗೇ ಒಂದೇ ಎರಡೇ ಎಲ್ಲರನ್ನೂ ಸುಧಾರಿಸಿಕೊಂಡು ಹೋಗ್ತಿದ್ದ ಅವಳಿಗೆ ಸುಸ್ತಾಗ್ತಾ ಇದ್ಯಾಂತ ನಾವ್ಯಾರೂ ಕೇಳಲೂ ಇಲ್ಲ,ಅವಳುಹೇಳಲೂ ಇಲ್ಲ.
  ಕಾಲಚಕ್ರವುರುಳಿದೆ,ನಾನೀಗ ಗೃಹಿಣಿ.ನನಗೀಗ ಪ್ರತೀ ಕ್ಷಣವೂ ಆಯಿಯ ದಿನಚರಿಯದ್ದೇ ನೆನಪು ಮರುಕಳಿಸುತ್ತದೆ.ಬೆಳಗ್ಗೆ ಏಳುವಾಗ,ತಿಂಡಿ-ಬುತ್ತಿ ಮಾಡಿ ಕಛೇರಿಗೆ ಓಡುವಾಗ,ನಾನ್ಮಾಡಿದ ಅಡಿಗೆಯ ಬಗ್ಗೆ ವಿಮರ್ಶೆ ಕೇಳಿದಾಗ,ಹೀಗೆ ಎಲ್ಲದರಲ್ಲೂ ಅವಳದೇ ಕನವರಿಕೆಇದನ್ನೆಲ್ಲಾಅವಳಲ್ಲಿ ಹೇಳಿದರೆ ಮುಗುಳ್ನಗೆಯೇ ಅವಳ ಉತ್ತರ
  ಇವತ್ತು 'ವಿಶ್ವ ಅಮ್ಮಂದಿರ ದಿನ'.. ನನಗೋ ಪ್ರತಿದಿನವೂ,ಪ್ರತಿ ಕ್ಷಣವೂ ಅಮ್ಮನ ದಿನವೇ..  ಲೇಖನ ನನ್ನ ಪ್ರೀತಿಯ ಆಯಿಗೆ,ನನ್ನ ಮಗಳಂತೆಪ್ರೀತಿಸುವ  ನಮ್ಮವರಮ್ಮ ನನ್ನ ಅಮ್ಮನಿಗೆ ಹಾಗೂ ಮಾತೃಹೃದಯವುಳ್ಳ ಎಲ್ಲಾ ಅಮ್ಮಂದಿರಿಗೂ ಎಲ್ಲರಿಗೂ ಅರ್ಪಣೆ.
ನಿಮ್ಮ ಮಗಳು,
ಶುಭಶ್ರೀ ಭಟ್ಟ

"ಗೋಟಡಕೆಗೆ ಸಿಕ್ಕ ಮಿಠಾಯಿ"

ಬಾಯಲ್ಲಿಟ್ಟರೆ ಕರಗುವ,ಕಲ್ಲುಸಕ್ಕರೆಗಿಂತ ಸಿಹಿಯಾದ,ಮೆದ್ದರೆ ಬಾಯೆಲ್ಲಾ ಕೆಂಗುಲಾಬಿಯಂತಾಗುವ 'ಬೊಂಬಾಯಿ ಮಿಠಾಯಿ' ಅಂದರೆ ನಮಗೆಲ್ಲಾ ಅದೇನೋ ಅಚ್ಚರಿ,ಕುತೂ...