Friday, 28 November 2014
ಮರಳಿ ಬಾ ಗೂಡಿಗೆ
ಪ್ರೀತಿಯ ಗರ್ಭದೊಳಗೆ
ಪ್ರೇಮದ ಮೊಳಕೆ
ಎದೆಯಲ್ಲಿ ನವನವೀನ ಪುಳಕ
ನವಮಾಸವು ತುಂಬಲೆಂಬ ತವಕ ||
ನಿನ್ನ ಹೂನಗುವಿನಲೆಯಲಿ ನಾ ನಲಿವ ನಲಿವಾದರೆ
ನಿನ್ನ ಅಳುವಿನಬ್ಬರಕ್ಕೆ ನಾ ಗಾಳಕ್ಕೆ ಸಿಕ್ಕ ಮೀನು....
ನೀ ಅಂಬೆಗಾಲಿಟ್ಟು ನನ್ನೆಡೆ ಬರುತ್ತಿರೆ,
ನನ್ನಲ್ಲೊಡುತ್ತಿತ್ತು ಬಂಗಾರದ ಜಿಂಕೆ
ನಿನ್ನ ಮುದ್ದು ಮಾತಿನ ಲಲ್ಲೆಗೆ
ಮೂಡುತ್ತಿತ್ತು ಹೊಸ ಲವಲವಿಕೆ ||
ಇಂತು ನನ್ನ ಜೀವಕ್ಕೆ ಜೀವವಾದ ನೀನು
ಹೋದದ್ಯಾಕೆ ನನ್ನಿಂದ ದೂರ,
ಈ ಅಮ್ಮನ ಪ್ರೀತಿಗಿಂತ ಹತ್ತಿರವಾಯ್ತೆ
ನಿನಗೆ ಆ ದೇವನ ಸನಿಹ|
ಮರಳಿ ಬಾ ನನ್ನ ಕಂದ
ನನ್ನ ಬಾಳಿಗೆ ಬೆಳಕಾಗಿ
ಜೀವನದ ಉಸಿರಾಗ ಮರಳಿ ಬಾ ನನ್ನ ಕಂದ
ಆದರೆ ಅತಿಥಿಯಾಗಲ್ಲ , ಶಾಶ್ವತವಾಗಿ
ಮರಳಿ ಬಾ ನನ್ನ ಕಂದ ನನ್ನೆದೆಯ ಗೂಡಿಗೆ
ನಿನ್ನಮ್ಮನ ಗರ್ಭದ ಗೂಡಿಗೆ ||
ಪ್ರೇಮದ ಮೊಳಕೆ
ಎದೆಯಲ್ಲಿ ನವನವೀನ ಪುಳಕ
ನವಮಾಸವು ತುಂಬಲೆಂಬ ತವಕ ||
ನಿನ್ನ ಹೂನಗುವಿನಲೆಯಲಿ ನಾ ನಲಿವ ನಲಿವಾದರೆ
ನಿನ್ನ ಅಳುವಿನಬ್ಬರಕ್ಕೆ ನಾ ಗಾಳಕ್ಕೆ ಸಿಕ್ಕ ಮೀನು....
ನೀ ಅಂಬೆಗಾಲಿಟ್ಟು ನನ್ನೆಡೆ ಬರುತ್ತಿರೆ,
ನನ್ನಲ್ಲೊಡುತ್ತಿತ್ತು ಬಂಗಾರದ ಜಿಂಕೆ
ನಿನ್ನ ಮುದ್ದು ಮಾತಿನ ಲಲ್ಲೆಗೆ
ಮೂಡುತ್ತಿತ್ತು ಹೊಸ ಲವಲವಿಕೆ ||
ಇಂತು ನನ್ನ ಜೀವಕ್ಕೆ ಜೀವವಾದ ನೀನು
ಹೋದದ್ಯಾಕೆ ನನ್ನಿಂದ ದೂರ,
ಈ ಅಮ್ಮನ ಪ್ರೀತಿಗಿಂತ ಹತ್ತಿರವಾಯ್ತೆ
ನಿನಗೆ ಆ ದೇವನ ಸನಿಹ|
ಮರಳಿ ಬಾ ನನ್ನ ಕಂದ
ನನ್ನ ಬಾಳಿಗೆ ಬೆಳಕಾಗಿ
ಜೀವನದ ಉಸಿರಾಗ ಮರಳಿ ಬಾ ನನ್ನ ಕಂದ
ಆದರೆ ಅತಿಥಿಯಾಗಲ್ಲ , ಶಾಶ್ವತವಾಗಿ
ಮರಳಿ ಬಾ ನನ್ನ ಕಂದ ನನ್ನೆದೆಯ ಗೂಡಿಗೆ
ನಿನ್ನಮ್ಮನ ಗರ್ಭದ ಗೂಡಿಗೆ ||
ನಿಮ್ಮ,
ಶುಭಶ್ರೀ ಭಟ್ಟ
Subscribe to:
Posts (Atom)
"ಗೋಟಡಕೆಗೆ ಸಿಕ್ಕ ಮಿಠಾಯಿ"
ಬಾಯಲ್ಲಿಟ್ಟರೆ ಕರಗುವ,ಕಲ್ಲುಸಕ್ಕರೆಗಿಂತ ಸಿಹಿಯಾದ,ಮೆದ್ದರೆ ಬಾಯೆಲ್ಲಾ ಕೆಂಗುಲಾಬಿಯಂತಾಗುವ 'ಬೊಂಬಾಯಿ ಮಿಠಾಯಿ' ಅಂದರೆ ನಮಗೆಲ್ಲಾ ಅದೇನೋ ಅಚ್ಚರಿ,ಕುತೂ...

-
ಮನವೆರಡರ ಪ್ರಣಯದಲ್ಲಿ ಋತುಮಾಸಗಳು ಉರುಳಿ ನೆನಪುಗಳೆಲ್ಲಾ ಗರ್ಭಕಟ್ಟಿ ಕನಸೆ೦ಬ ಭ್ರೂಣ ಬೆಳೆದು ನನಸೆ೦ಬ ಮಗುವಾಗಿ ಜನಿಸುವ ಮುನ್ನವೇ ವೇದನೆಯೀ೦ದ ಅಸುನೀಗಿದೆ ಬರಿದಾ...
-
ನನ್ನ ಮನಸು ಅದರ ಕನಸು ಪುಟ್ಟಪುಟ್ಟ ಹೆಜ್ಜೆಯಿಟ್ಟು ಮುದ್ದಾಗಿ ತೊದಲ್ನುಡಿದು ನಿಮ್ಮನ್ನೆಲ್ಲಾ ನಗಿಸುವ ನನಗೂ ಒಂದು ಮನಸಿದೆ ಅದರಲ್ಲೊಂದು ಕನಸಿದೆ|| ಇಷ್...
-
ನೀನಿಲ್ಲದೇ ಮಾಸಗಳುರುಳಿ ಪಕ್ಷವೆರಡು ಬದಿಸರಿದರೂ ನನ್ನೆದೆಯ ಸಮುದ್ರದೊಳು ನೀನಿಟ್ಟ ಹೆಜ್ಜೆಗುರುತಿನ್ನೂ ಮಾಸಿಲ್ಲ|| ನ೦ಬಿಕೆಯ ತಳಹದಿಯಲ್ಲಿ ಕಟ್ಟಿದ ಪ್...