Monday 16 April 2012

ನೀನಿಲ್ಲದೇ.....



ನೀನಿಲ್ಲದೇ ಮಾಸಗಳುರುಳಿ
ಪಕ್ಷವೆರಡು ಬದಿಸರಿದರೂ
ನನ್ನೆದೆಯ ಸಮುದ್ರದೊಳು
ನೀನಿಟ್ಟ ಹೆಜ್ಜೆಗುರುತಿನ್ನೂ ಮಾಸಿಲ್ಲ||
 
   ನ೦ಬಿಕೆಯ ತಳಹದಿಯಲ್ಲಿ ಕಟ್ಟಿದ
   ಪ್ರೀತಿಯ ಸೌಧವ ಚೂರಾಗಿಸಿ
   ಇನ್ನಿಲ್ಲಿರಲಾರೆನೆ೦ಬ೦ತೆ ನನ್ನಗಲಿದ
   ಅವಸರದ ಹಿ೦ದಿರುವ ಪ್ರಶ್ನೆಗೆ
   ಉತ್ತರವಿನ್ನೂ ಸಿಕ್ಕಿಲ್ಲ||

ಬದಲಾವಣೆಯ ಅಲೆಯೊಡನೆ
ಬಲುದೂರ ತೇಲಿಹೋದ ನೀನು
ಕ್ಷಣವೂ ಸೋನೆಸುರಿಸುವ ಮನಕ್ಕೆ
ಸಾ೦ತ್ವನ ಹೇಳಲಾದರೂ ಮರಳಿ
ಬರುವೆಯೆ೦ಬ ನಿರೀಕ್ಷೆಯೀಗ ಹಸಿಯಾಗಿಲ್ಲ||

    -ಶುಭಶ್ರೀ ಭಟ್ಟ

23 comments:

Harisha - ಹರೀಶ said...

ಚೆನ್ನಾಗಿದ್ದು :)

KARTAVYAA said...

cholo iddu......keep it up.....

Shubhashree Bhat said...

ಧನ್ಯವಾದ :)

Anonymous said...

Good one :)
-Ashwath Manjunath

Shubhashree Bhat said...

ಧನ್ಯವಾದ :)

Nanda Kishor B said...

ನನ್ನ ಭಾವಗಳು ನಿಮ್ಮಲ್ಲಿ ಹೇಗೆ ಬಂತೋ?
:)
ಬರಹ ಚೆನ್ನಾಗಿದೆ..
ಮುಂದುವರೆಸಿ..

Nanda Kishor B said...

ನಮಸ್ತೇ
ನಿಮ್ಮ blog ನೋಡಿದೆ.
ಖುಶಿಯಾಯಿತು. ಬರೆಯುತ್ತಿರಿ.
:)

ನಿಮ್ಮ comment ಮಾಡುವ option ಅನ್ನು ಸ್ವಲ್ಪ ಬದಲಿಸುತ್ತೀರಾ?
ಹೀಗೆ ಮಾಡಿ,
settings -> commentಸ್ -> comment form placement -> full page
ಇದರಿಂದಾಗಿ ಓದುಗರ ಪ್ರತಿಕ್ರಿಯೆಗೆ ನೀವು ಮಾಡಿದ ಪ್ರತಿ-ಪ್ರತಿಕ್ರಿಯೆ ಓದುಗರಿಗೆ ತಲುಪಲು ಸುಲಭವಾಗುತ್ತದೆ :)
ಶುಭವಾಗಲಿ :)

--
ನಂದ.

prashasti said...

ಚೆಂದಿದ್ದು. ’ಮೊದಲ ಪ್ರಯತ್ನ’ಕ್ಕೆ ಅಭಿನಂದನೆ :-)

Anonymous said...

ಶುಭಶ್ರೀ ಅವರೇ,
ಕವಿತೆಯಲ್ಲಿನ ಭಾವ ಚೆಂದ ಇದೆ.
ಬರೆಯುತ್ತ ಇರಿ.
ಧನ್ಯವಾದಗಳು.
-RJ

ರಾಘವೇಂದ್ರ ಜೋಶಿ said...

ಶುಭಶ್ರೀ ಅವರೇ,
ಕವಿತೆಯಲ್ಲಿನ ಭಾವ ಚೆಂದ ಇದೆ.
ಬರೆಯುತ್ತ ಇರಿ.
ಧನ್ಯವಾದಗಳು.
-RJ

Shubhashree Bhat said...

ನಿಮ್ಮ ಸಲಹೆಗಳನ್ನು ಸ್ವೀಕರಿಸುತ್ತೇನೆ....
ತು೦ಬು ಹೃದಯದ ಧನ್ಯವಾದಗಳು ನಂದಕಿಶೋರವರೇ

Shubhashree Bhat said...

ತು೦ಬು ಹೃದಯದ ಧನ್ಯವಾದಗಳು Prashasti..

Shubhashree Bhat said...

ತು೦ಬು ಹೃದಯದ ಧನ್ಯವಾದಗಳು ರಾಘವೇಂದ್ರ ಸರ್..

Shubhashree Bhat said...

thankyu :)

ಈಶ್ವರ said...

ಚೆನ್ನಾಗಿದೆ ಶುಭಶ್ರೀ :) ಮುಂದುವರೆಸಿ :)

Shubhashree Bhat said...

ಧನ್ಯವಾದಗಳು Iswar :) :)

Prashanth hegde said...

nice keep it up....

Shubhashree Bhat said...

Thankyu Prashanth :) :)

Unknown said...

ಎಲ್ಲ ಬರಹ ಗಳು ಚನ್ನಾಗಿವೆ.
ನನ್ನ ಬ್ಲಾಗ್ ನೋಡಿ ನಿಮ್ಮ ಅನಿಸಿಕೆ ತಿಳಿಸಿ
http://rakeshashapur.blogspot.com

Anonymous said...

ಹೆಜ್ಜೆ ಗುರುತು ಮಾಸದೆ , ಪಶ್ನೆಗೆ ಉತ್ತರವೂ ಸಿಗದೇ .. ಕಾಯುತ್ತಿರುವ ನಿಮ್ಮ ಹುಸಿಯಾಗದ ನಿರೀಕ್ಷೆ ಫಲಿಸಲಿ..... ಚೆನ್ನಾಗಿದೆ ಭಾವ ..
http://nenapinasanchi.wordpress.com/

Shubhashree Bhat said...

Dhanyavadgalu R.R.Ashpure and nenapinasanchi....

ಪದ್ಮಾ ಭಟ್ said...

nice lines ....

mauna->matu said...

good one :)

"ಗೋಟಡಕೆಗೆ ಸಿಕ್ಕ ಮಿಠಾಯಿ"

ಬಾಯಲ್ಲಿಟ್ಟರೆ ಕರಗುವ,ಕಲ್ಲುಸಕ್ಕರೆಗಿಂತ ಸಿಹಿಯಾದ,ಮೆದ್ದರೆ ಬಾಯೆಲ್ಲಾ ಕೆಂಗುಲಾಬಿಯಂತಾಗುವ 'ಬೊಂಬಾಯಿ ಮಿಠಾಯಿ' ಅಂದರೆ ನಮಗೆಲ್ಲಾ ಅದೇನೋ ಅಚ್ಚರಿ,ಕುತೂ...