Monday, 26 December 2016

ನನಗೀಗ ನಿನ್ನದೇ ನೆನಪು...




ಇಂಪಾದ ಕೋಗಿಲೆ ಕಲರವ
ಸಂಪಿಗೆ ಸೂಸುವ ಪರಿಮಳ
ತಂಪಾಗಿ ತೂಗಿಬರೊ ತಂಗಾಳಿ
ಯಾವುದರ ಅರಿವಿಲ್ಲ-ನನಗೀಗ ನಿನ್ನದೇ ನೆನಪು

ಕಣ್ಮನ ತಣಿಸುವ ಗಿರಿಸಾಲು
ಮನ ಮುದಗೊಳಿಸುವ ಬೆಳ್ಮುಗಿಲು
ಕಚಗುಳಿಯಿಡುವ ಕಡಲತೀರ
ಯಾವುದೂ ಬೇಕಿಲ್ಲ-ನನಗೀಗ ನಿನ್ನದೇ ನೆನಪು

ಅಸ್ತಗಿರಿಯತ್ತ ಓಡುವ ಸೂರ್ಯ
ಸಂಜೆವೆಣ್ಣಿನ ನೇಸರ ನೆರಳು
ಮುಸ್ಸಂಜೆಯ ದೀಪದ ಬೆಳಕು
ಯಾವುದೂ ತಿಳಿತಿಲ್ಲ-ನನಗೀಗ ನಿನ್ನದೇ ನೆನಪು

ನಿನ್ನೊಲುಮೆಯ ಕಡಲಲ್ಲಿ ತೇಲಿ
ನಿನ್ನ ತೋಳಸೆರೆಯಲ್ಲಿ ಬಂಧಿಯಾಗಿ
ಸದಾ ನಿನ್ನ ಪ್ರೇಮಖೈದಿಯಾಗುವಾಸೆ
ಬೇಗ ಬಾ ಇನಿಯ-ನನಗಂತೂ ನಿನ್ನದೇ ನೆನಪು


  -ಶುಭಶ್ರೀ ಭಟ್ಟ

Saturday, 7 May 2016

ಗಾಳಕ್ಕೆ ಸಿಕ್ಕ ಮೀನು






"ನಂಗಿಷ್ಟಾಗಿದ್ದನ್ನ ಮಾಡಬೇಡ ಯಾವಾಗ್ಲೂ ದೋಸೆ ಇಡ್ಲಿನೇ"ಎಂದು ಸಿಡಿಮಿಡಿಗೊಳ್ಳುವ ತಂಗಿ."ನನ್ನ ಪೆನ್ನಲ್ಲಿ ಇಂಕು ಖಾಲಿಯಾಯ್ದು,ಕರ್ಚಿಫ್ಕಾಣಿಸ್ತಿಲ್ಲೆ,ಛತ್ರಿ ಎಲ್ಲಿಟ್ಟಿದ್ದೆಎಂದು ಕಿರಿಚುವ ನಾನು.ನಮ್ಮನ್ನು ಶಾಲೆಗೆ ಕಳುಹಿಸಿ ತಿಂಡಿತಿನ್ನುವ ಹೊತ್ತಿಗೆ "ಒಡ್ತಿರೇ!! ಪಾತ್ರೆ ತಿಕ್ಕುದು (ಸೋಪ್)ಖಾಲಿನ್ರೊಕರು ನೋಡ್ರಾ ಅಕ್ಕಚ್ಚು (ಕಲಗಚ್ಚುಕುಡ್ಯುದಿಲ್ಲಾ"- ಮಾಸ್ತಿಯ ಕಾಟ."ಜಯಾ ನನ್ನ ವಾಚ್ ಎಲ್ಲಿ?, ಚೀಟಿ ಕೊಡು ಬೇಗಾ"- ಅಪ್ಪನ ಗೋಳುಹೀಗೇ ಒಂದೇ ಎರಡೇ ಎಲ್ಲರನ್ನೂ ಸುಧಾರಿಸಿಕೊಂಡು ಹೋಗ್ತಿದ್ದ ಅವಳಿಗೆ ಸುಸ್ತಾಗ್ತಾ ಇದ್ಯಾಂತ ನಾವ್ಯಾರೂ ಕೇಳಲೂ ಇಲ್ಲ,ಅವಳುಹೇಳಲೂ ಇಲ್ಲ.
  ಕಾಲಚಕ್ರವುರುಳಿದೆ,ನಾನೀಗ ಗೃಹಿಣಿ.ನನಗೀಗ ಪ್ರತೀ ಕ್ಷಣವೂ ಆಯಿಯ ದಿನಚರಿಯದ್ದೇ ನೆನಪು ಮರುಕಳಿಸುತ್ತದೆ.ಬೆಳಗ್ಗೆ ಏಳುವಾಗ,ತಿಂಡಿ-ಬುತ್ತಿ ಮಾಡಿ ಕಛೇರಿಗೆ ಓಡುವಾಗ,ನಾನ್ಮಾಡಿದ ಅಡಿಗೆಯ ಬಗ್ಗೆ ವಿಮರ್ಶೆ ಕೇಳಿದಾಗ,ಹೀಗೆ ಎಲ್ಲದರಲ್ಲೂ ಅವಳದೇ ಕನವರಿಕೆಇದನ್ನೆಲ್ಲಾಅವಳಲ್ಲಿ ಹೇಳಿದರೆ ಮುಗುಳ್ನಗೆಯೇ ಅವಳ ಉತ್ತರ
  ಇವತ್ತು 'ವಿಶ್ವ ಅಮ್ಮಂದಿರ ದಿನ'.. ನನಗೋ ಪ್ರತಿದಿನವೂ,ಪ್ರತಿ ಕ್ಷಣವೂ ಅಮ್ಮನ ದಿನವೇ..  ಲೇಖನ ನನ್ನ ಪ್ರೀತಿಯ ಆಯಿಗೆ,ನನ್ನ ಮಗಳಂತೆಪ್ರೀತಿಸುವ  ನಮ್ಮವರಮ್ಮ ನನ್ನ ಅಮ್ಮನಿಗೆ ಹಾಗೂ ಮಾತೃಹೃದಯವುಳ್ಳ ಎಲ್ಲಾ ಅಮ್ಮಂದಿರಿಗೂ ಎಲ್ಲರಿಗೂ ಅರ್ಪಣೆ.
ನಿಮ್ಮ ಮಗಳು,
ಶುಭಶ್ರೀ ಭಟ್ಟ

Thursday, 30 July 2015

ನನ್ನ ಮನಸು ಅದರ ಕನಸು

     ನನ್ನ ಮನಸು ಅದರ ಕನಸು

ಪುಟ್ಟಪುಟ್ಟ ಹೆಜ್ಜೆಯಿಟ್ಟು
ಮುದ್ದಾಗಿ ತೊದಲ್ನುಡಿದು
ನಿಮ್ಮನ್ನೆಲ್ಲಾ ನಗಿಸುವ
ನನಗೂ ಒಂದು ಮನಸಿದೆ
ಅದರಲ್ಲೊಂದು ಕನಸಿದೆ||

ಇಷ್ಟವಿರದ ಪಾಠಿಚೀಲವ ಹೊತ್ತು
ನೆಚ್ಚಿಕೊಂಡ ಕುಂಟಾಬಿಲ್ಲೆ ಮರೆತು
ನಿಮಗಾಗಿ ಓದುತ್ತಿರುವ
ನನಗೂ ಒಂದು ಮನಸಿದೆ
ಅದರಲ್ಲೊಂದು ಕನಸಿದೆ||

ಹೊರಲಾರದ ಹರೆಯದಿ ನೆರೆದು
ಹೇಳಲಾಗದ ನೋವನುಂಗಿ
ನಿಮಗೋಸುಗ ಹುಸಿನಗುವ ಬೀರುವ
ನನಗೂ ಒಂದು ಮನಸಿದೆ
ಅದರಲ್ಲೊಂದು ಕನಸಿದೆ||

ನಸುಕಿನ ನಿದ್ರೆಯ ದೂಡಿ
ಲಗುಬಗೆಯಲಿ ಕೆಲಸಕೆ ಓಡಿ
ನಿಮ್ಮ ನೋಡಿ ಸುಸ್ತುಮರೆವ
ನನಗೂ ಒಂದು ಮನಸಿದೆ
ಅದರಲ್ಲೊಂದು ಕನಸಿದೆ||

ಕೃಷ್ಣನ ಕಣ್ಮಣಿ ರುಕ್ಮಿಣಿಯಾಗಿ
ಮಮತೆಯ ಯಶೋಧೆಯಾಗಿ
ಕ್ಷಣಕ್ಕೊಂದು ಪಾತ್ರ ಧರಿಸುವ
ನನಗೂ ಒಂದು ಮನಸಿದೆ
ಅದರಲ್ಲೊಂದು ಕನಸಿದೆ||

ಬಿರುಗಾಳಿಗೆ ಬೆದರದಂತೆ
ಬರಸಿಡಿಲಿಗೆ ಬಾಡದಂತೆ
ಸಂಸಾರದ ತೆಪ್ಪ ನಡೆಸಲು ಸಹಾಯ ಮಾಡುವ
ನನಗೂ ಒಂದು ಮನಸಿದೆ
ಅದರಲ್ಲೊಂದು ಕನಸಿದೆ||

ನಕ್ಷತ್ರದಂತೆ ಮಿಂಚುವ
ಮೀನಿನಂತೆ ಮಾಯವಾಗುವ
ಅಲೆಗಳಂತೆ ಪುಟಿದೆಳುವ
ಕಡಲಡಿಯಲಿ ಮಲಗುವಂತ
ಪೂರೈಸಲಾಗದ ಕನಸುಗಳೇ ನೂರಾರು ನನಗೆ
ಆದರೂ ನನಗೂ ಒಂದು ಮನಸಿದೆ
ಅದರಲ್ಲೊಂದು ಕನಸಿದೆ||

-ಶುಭಶ್ರೀ ಭಟ್



Friday, 28 November 2014

ಮುಸ್ಸಂಜೆ ಮಾತು

ಬಾಲ್ಯದ ಬಾಲ ಸೂರ್ಯ 
ಬಾಳಿಂದ ಬದಿಸರಿದಾಯ್ತು 
ಯೌವನದ ಯುವಸೂರ್ಯ 
ಮರೆಯಾಗಿ ಸಮಯವಾಯ್ತು 
ಮುಸ್ಸಂಜೆಯ ಮುಪ್ಪು ಸೂರ್ಯ 
ನೆತ್ತಿಗೆ ಹತ್ತಿ ಕುಳಿತಿದ್ದಾಯ್ತು || 
  ನೆತ್ತಿಗೇರಿದ ಮುಪ್ಪನ್ನು 
ಸಾವೆಂಬ ಕಗ್ಗತ್ತಲು 
ಆವರಿಸೋದು ತಡವಿಲ್ಲ 
ಮುಸ್ಸಂಜೆಯ ಮಾತಿಗಿಲ್ಲಿ 
ಕಿವಿಯಾಗೋಕೆ ಯಾರಿಲ್ಲ ||






























ನಿಮ್ಮ,

ಶುಭಶ್ರೀ ಭಟ್ಟ

ಮರಳಿ ಬಾ ಗೂಡಿಗೆ

ಪ್ರೀತಿಯ ಗರ್ಭದೊಳಗೆ     
ಪ್ರೇಮದ ಮೊಳಕೆ       
ಎದೆಯಲ್ಲಿ ನವನವೀನ ಪುಳಕ 
ನವಮಾಸವು ತುಂಬಲೆಂಬ ತವಕ  ||
ನಿನ್ನ ಹೂನಗುವಿನಲೆಯಲಿ ನಾ ನಲಿವ ನಲಿವಾದರೆ      
ನಿನ್ನ ಅಳುವಿನಬ್ಬರಕ್ಕೆ ನಾ ಗಾಳಕ್ಕೆ ಸಿಕ್ಕ ಮೀನು.... 
ನೀ ಅಂಬೆಗಾಲಿಟ್ಟು ನನ್ನೆಡೆ ಬರುತ್ತಿರೆ, 
 ನನ್ನಲ್ಲೊಡುತ್ತಿತ್ತು ಬಂಗಾರದ ಜಿಂಕೆ   
ನಿನ್ನ ಮುದ್ದು ಮಾತಿನ ಲಲ್ಲೆಗೆ 
ಮೂಡುತ್ತಿತ್ತು ಹೊಸ ಲವಲವಿಕೆ || 
ಇಂತು ನನ್ನ ಜೀವಕ್ಕೆ ಜೀವವಾದ ನೀನು 
 ಹೋದದ್ಯಾಕೆ ನನ್ನಿಂದ ದೂರ,  
ಈ ಅಮ್ಮನ ಪ್ರೀತಿಗಿಂತ ಹತ್ತಿರವಾಯ್ತೆ 
ನಿನಗೆ ಆ ದೇವನ ಸನಿಹ|
ಮರಳಿ ಬಾ ನನ್ನ ಕಂದ 
ನನ್ನ ಬಾಳಿಗೆ ಬೆಳಕಾಗಿ
 ಜೀವನದ ಉಸಿರಾಗ ಮರಳಿ ಬಾ ನನ್ನ ಕಂದ 
ಆದರೆ ಅತಿಥಿಯಾಗಲ್ಲ , ಶಾಶ್ವತವಾಗಿ 
 ಮರಳಿ ಬಾ ನನ್ನ ಕಂದ ನನ್ನೆದೆಯ ಗೂಡಿಗೆ 
ನಿನ್ನಮ್ಮನ ಗರ್ಭದ ಗೂಡಿಗೆ ||


ನಿಮ್ಮ,
ಶುಭಶ್ರೀ ಭಟ್ಟ

Monday, 8 September 2014

ಗುರು-ಗ್ರಹಣ

ಅವರ ಮನ ಹೂವಿನಂತದ್ದು,
ಅವರ ಮಮತೆ ಅಮ್ಮನಂತದ್ದು,
ಅವರ ಪ್ರೀತಿ ಕಲ್ಮಶವಿಲ್ಲದ್ದು,
ಅವರ ನಗು ಹಸುಗೂಸಿಂದ್ದು,
ಇಂತಿಪ್ಪ ನಮ್ಮ ಗುರುವಿಗೆ,
ಕವಿಯಿತು ಗ್ರಹಣದ ಛಾಯೆ||
ಅದು ಚಂದ್ರಗ್ರಹಣವೋ,
ಅಥವಾ ಸೂರ್ಯಗ್ರಹಣವೋ,
ಒಟ್ಟಿನಲ್ಲಿ ಗ್ರಹಣ,ಗುರು-ಗ್ರಹಣ,
ಅಂದರೆ ಶಾಶ್ವತವಲ್ಲದ್ದು||
ಪ್ರಭು ರಾಮಚಂದ್ರನಿಗೂ
ತಪ್ಪಲಿಲ್ಲ ವನವಾಸದ ಬಿಸಿ,
ಮಾತೆ ಸೀತಾದೇವಿಗೂ
ತಾಕದಿರಲಿಲ್ಲ ಅಪವಾದದ ಛಾಯೆ,
ಅಂತೆಯೇ ನಮ್ಮ ರಾಘವರಿಗೂ
ಸೋಕಿದೆ ಅಪಮಾನದ ಸೋಂಕು||
ಅಂಜದಿರಿ,ಅಳುಕದಿರಿ ಗುರು-ಭಕ್ತವೃಂದವೇ,
ಗ್ರಹಣ ಕರಗಲು,ಸೋಂಕು ಮಾಗಲು
ಇನ್ನಿಲ್ಲ ಬಹುದಿನ||
ಅಮೃತವನ್ನೀಯುವ ತಾಯಿಗೆ
ವಿಷವುಣಬಡಿಸಿದ ದಿವಾಕರನ ಲತೆಗೆ
ಕಾದಿದೆ ಪಶ್ಚಾತ್ತಾಪವಿಲ್ಲದ ಶಿಕ್ಷೆ,
ಆಗಲಿದೆ ಶ್ರೀರಾಮನಿಂದಲೇ
ಸಂಸ್ಠಾನದ ಶ್ರೀರಕ್ಷೆ
ನಮಗಿರಲಿ ಆ ಸುದಿನದ ನೀರೀಕ್ಷೆ||

ನಿಮ್ಮ,
ಶುಭಶ್ರೀ

Sunday, 7 July 2013

ಬೆಟ್ಟದ ತುದಿಯಲ್ಲಿ...




ಇನಿಯನಿಗಾಗಿ  ಕಾದು ವಿರಹದೀ
ಮುದುಡಿದ ಭೂರಮೆ,
ಕೈಗೆಟುವಂತರದೀ ಮೋಡಗಳ
ಮರೆಯಿಂದಿಣುಕುವ ಭಾಸ್ಕರ,
ಮುನಿಸಿಕೊಂಡ ಪ್ರಿಯತಮೆಯ
ಮನವೋಲಿಸಲು ಸುರಿಸುವ
ಇಬ್ಬನಿಯಂತಹ ಮುತ್ತಿನ ಸಾಲು,
ಪ್ರೇಮಿಗಳ ಒಂದಾಗುವಿಕೆಗೆ ಸಾಕ್ಷಿಯೆಂಬಂತೆ
ಮೆಲ್ಲನೆ ಮೈತಾಕುವ ತಂಗಾಳಿ,
ಮೂಗರಳಿಸುವಂತ ಪರಿಮಳ,
ಇಂದು ಬೆಟ್ಟದ ತುದಿಯಲ್ಲಿ ಕಂಡೆ
ಪ್ರಕೃತಿಯ ಪ್ರೇಮಕಥೆ.....


-ಶುಭಶ್ರೀ ಭಟ್ಟ

"ಗೋಟಡಕೆಗೆ ಸಿಕ್ಕ ಮಿಠಾಯಿ"

ಬಾಯಲ್ಲಿಟ್ಟರೆ ಕರಗುವ,ಕಲ್ಲುಸಕ್ಕರೆಗಿಂತ ಸಿಹಿಯಾದ,ಮೆದ್ದರೆ ಬಾಯೆಲ್ಲಾ ಕೆಂಗುಲಾಬಿಯಂತಾಗುವ 'ಬೊಂಬಾಯಿ ಮಿಠಾಯಿ' ಅಂದರೆ ನಮಗೆಲ್ಲಾ ಅದೇನೋ ಅಚ್ಚರಿ,ಕುತೂ...